ಡಾ. ನೆಲ್ಲಿಕಟ್ಟೆ ಸಿದ್ದೇಶ್ರವರ ಸಂಶೋಧನ ಕೃತಿಯನ್ನು ದಿನಾಂಕ: 23-11-2008ರಂದು ಬಳ್ಳಾರಿಯಲ್ಲಿ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಡಾ. ಸುಭಾಷ್ ಭರಣಿಯವರು ಲೋಕಾರ್ಪಣೆ ಮಾಡುವ ನಿಮಿತ್ತ ಈ ಲೇಖನ
ಸೃಜನಶೀಲ ಪ್ರತಿಭಾವಂತ: ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್
ಹುಲ್ಲಾಗಿ ಬೆಳೆಯಲಿ ನಿಯತ್ತಿಲಿ ಬಾಳಲಿ
ಮಾವಿನ ತೋಪ್ನಂಗೆ ನೆರಳಾಗಲಿ ಸಿದ್ದೇಶಿ
ಜಯವಂತನಾಗಿ ಬೆಳಗಲಿ
ಆಸಿವಂತನಾಗು ದೇಸಕೆ ದೊಡ್ಡವನಾಗು
ರಾಶಿ ಹೊನ್ನಿಲಿ ದೊರೆಯಾಗು ಸಿದ್ಧೇಶಿ
ನೀತಿಯ ಮುತ್ತಾಗು ಜನರಿಗೆ-
ಎಂಬ ಜಾನಪದ ಕವಯಿತ್ರಿ ಹೆತ್ತವ್ವನ ಹಾರೈಕೆಯಂತೆ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ರವರು ಸ್ವಸ್ಥ ಸಮಾಜ ನಿಮರ್ಾಣವಾಗಬೇಕೆಂಬ ಕಾಳಜಿಯನ್ಹೊಂದಿರುವ ಬಹುಮುಖ ಪ್ರತಿಭೆ. ಚಿತ್ರದುರ್ಗ ತಾಲ್ಲೂಕು ಭರಮಸಾಗರ ಹೋಬಳಿಯ ನೆಲ್ಲಿಕಟ್ಟೆ ಗ್ರಾಮದ ಮಾರಕ್ಕ-ಸಿದ್ದಪ್ಪ ದಂಪತಿಗಳ ಮಡಿಲಲ್ಲಿ ಮಾಚರ್್ 4, 1972ರಂದು ಜನಿಸಿದ ಸಿದ್ದೇಶ್ ಕಡುಬಡತನದಲ್ಲಿ ನೊಂದು ಬೆಂದವರು. ಬಡತನಕ್ಕೆ ಬಾಗದೆ, ಕೂಲಿನಾಲಿ ಮಾಡುತ್ತಲೆ ವ್ಯಾಸಂಗ ಮಾಡಿದವರು. ಸಿದ್ದೇಶ್ರವರಿಗೆ ಅನ್ನ ಆಹಾರ ಆಶ್ರಯಕ್ಕೆ ಬಡತನವಿತ್ತೇ ವಿನಹ ಅಧ್ಯಯನಕ್ಕಲ್ಲ ಎಂಬಂತೆ ಬಿ.ಎ. ಪದವಿಯನ್ನು 7ನೇ ರ್ಯಾಂಕ್ನೊಂದಿಗೆ, ಬಿ.ಇಡಿ. ಪದವಿಯನ್ನು ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಸ್ಮರಣಾರ್ಥ ಚಿನ್ನದಪದಕದೊಂದಿಗೆ, ಕನ್ನಡ ಎಂ.ಎ. ಪದವಿಯನ್ನು 3ನೇ ರ್ಯಾಂಕ್ನೊಂದಿಗೆ, ಎಂ.ಇಡಿ. ಪದವಿಯನ್ನು ಉನ್ನತ ದಜರ್ೆಯೊಂದಿಗೆ, ಪಿಎಚ್.ಡಿ. ಪದವಿಯನ್ನು ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿ ಒಂದು: ಅಧ್ಯಯನ ಎಂಬ ಮಹಾ ಪ್ರಬಂಧಕ್ಕೆ ಪಡೆದಿರುವ ಸಾಧನಶೀಲರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿತೀಡಲು ಉತ್ತೇಜಿಸುವಂತಹ ಕವನಗಳ ಸಂಕಲನವಾದ ಬಿಸಿಲು-ಮಳೆ ಕೃತಿಯನ್ನು, ಶಿವಶರಣರ ಬದುಕನ್ನು ಪರಿಚಯಿಸುವ ಛಲಬೇಕು ಶರಣಂಗೆ ಕೃತಿಯನ್ನು ಪ್ರಕಟಿಸಿರುವ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ರವರು ಸಾವಿಲ್ಲದ್ದೇ ಸಾಹಿತ್ಯ. ಇದೊಂದು ಸಂಜೀವಿನಿ; ಮೌಲ್ಯಗಳನ್ನು ಆದರ್ಶಗಳನ್ನು ಶಾಶ್ವತವಾಗಿ ಸೆರೆಹಿಡಿದಿಟ್ಟಿರುವ ಮಾಧ್ಯಮ. ಬರಹ ತಾಳಿದ ಸಶಕ್ತ ಭಾವನೆಯು ಸಾಹಿತ್ಯವಾಗುತ್ತದೆ. ಬದುಕನ್ನು ಹಿತವಾಗಿಸುವುದು ಸಾಹಿತ್ಯ. ವ್ಯಷ್ಟಿ-ಸಮಷ್ಟಿಯ ಸಂಸ್ಕೃತಿಯನ್ನು ಮನಮುಟ್ಟುವಂತೆ; ಹೃದಯ ತಟ್ಟುವಂತೆ ಸಹೃದಯನಿಗೆ ತಲುಪಿಸುವ ದೀಪ್ತಿಯೇ ಸಾಹಿತ್ಯ. ಎಂದು ಹೇಳಿರುವಂತೆಯೇ ಉದಾತ್ತವಾಗಿ ಬದುಕಲು ಉತ್ತೇಜಿಸುವಂತಹ ವ್ಯಕ್ತಿತ್ವ ವಿಕಾಸ ಹಾಗೂ ಕನ್ನಡ ಸಾಹಿತ್ಯ ಎಂಬ ಅಮೂಲ್ಯ ಕೃತಿಯನ್ನು, ಸಂಶೋಧನಾ ಕೃತಿಯಾದ ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿ ಕೃತಿಯನ್ನು ಸಮಪರ್ಿಸಿದ್ದಾರೆ. ಅಲ್ಲದೆ ಪ್ರೊ. ಕೃಷ್ಣಯ್ಯನವರ ಭಾರತದ ಧೀರ ಮಹಿಳೆ ಚಿತ್ರದುರ್ಗದ ಒನಕೆ ಓಬವ್ವ ಕೃತಿಯನ್ನು, ಪಿ. ಚಂದ್ರಶೇಖರಯ್ಯನವರೊಂದಿಗೆ ಚಿತ್ರದುರ್ಗ ಜಿಲ್ಲಾ ಸಾಹಿತಿಗಳನ್ನು ಪರಿಚಯಿಸುವ ಸಾಹಿತಿ ಸಂಕಲ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಡಾ. ನೆಲ್ಲಿಕಟ್ಟೆಯವರ ಕಥೆ, ಕವನ, ಲೇಖನಗಳು ಹಲವು ಪತ್ರಿಕೆ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿಯಲ್ಲಿ ಭಾಷಣಗಳು ಪ್ರಸಾರವಾಗಿದೆ. ಅಖಿಲಭಾರತ 71 ಮತ್ತು 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನವಾಚನ ಮಾಡಿದ್ದಾರೆ. ಹಲವು ವಿಚಾರ ಸಂಕಿರಣಗಳಲ್ಲಿ, ಶಿಬಿರಗಳಲ್ಲಿ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಇವರ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ವಿವಿಧ ಸಂಘಸಂಸ್ಥೆಗಳು ಉತ್ತಮ ಶಿಕ್ಷಕ ಶಿಕ್ಷಕರತ್ನ, ಶಿಕ್ಷಣ ಭೂಷಣ ಡಾ. ಎಚ್. ನರಸಿಂಹಯ್ಯ ಪ್ರಶಸ್ತಿ ಅಖಿಲ ಕನರ್ಾಟಕ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ-ಮೊದಲಾದ ಗೌರವ ಮನ್ನಣೆ ನೀಡಿ ಅಭಿನಂದಿಸಿದೆ. ಸ್ಪಧರ್ಾಜಗತ್ತು ಮತ್ತು ಸೈಕಾಲಜಿ ಅಂಡ್ ಪರ್ಸನಾಲಿಟಿ ಡೆವಲಪ್ಮೆಂಟ್ ಮಾಸಪತ್ರಿಕೆಗಳಲ್ಲಿ ಅಂಕಣ ಬರಹಗಾರರಾಗಿರುವ ಸಿದ್ದೇಶ್ರವರ ವಿನಯತೆ, ಸ್ನೇಹಶೀಲ, ವೃತ್ತಿ ನಿಷ್ಠೆ, ಸಜ್ಜನಿಕೆ, ಸೃಜನಶೀಲತೆಗಳು ಆಪ್ಯಾಯಮಾನವಾದವುಗಳು. ಪ್ರಸ್ತುತ ಯಳಗೋಡು ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಕ್ರಮಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವರು. ಅವರ ಸಾಹಿತ್ಯ ಕೃಷಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವೆಯು ದ್ವಿಗುಣಗೊಳ್ಳಲಿ.
ಬಿ.ಎ. ನಾಗರಾಜ್, ಎಂ.ಎ.
ಕನ್ನಡ ಉಪನ್ಯಾಸಕರು
ಕನ್ನಡ ಉಪನ್ಯಾಸಕರು
ಬಾಳಿಗೊಂದು ಗುರಿ ಪದವಿಪೂರ್ವ ಕಾಲೇಜು
ಮತ್ತೋಡು
ಹೊಸದುರ್ಗ ತಾಲ್ಲೂಕು
ಚಿತ್ರದುರ್ಗ ಜಿಲ್ಲೆ
No comments:
Post a Comment